Monday, September 16, 2024

R Vishwanathan Tumkur with Bheemanakatte Swamiji


ಭೀಮನಕಟ್ಟೆ ಮಠಾಧೀಶರಾದ ಪರಮಪೂಜ್ಯ ಶ್ರೀ ರಘುವರೇಂದ್ರತೀರ್ಥ ಶ್ರೀಪಾದಂಗಳವರೊಂದಿಗೆ..............




 

Sunday, March 21, 2021

R Vishwanathan Tumkur with Dr. S L Bhyrappa, Eminent Writer


R Vishwanathan Tumkur  with Dr. S L Bhyrappa

R Vishwanathan Tumkur  with Dr. S L Bhyrappa


 

R Vishwanathan Tumkur with H.H. Sri Sringeri Jagadgurugalu.... Hassan and Tiptur


R Vishwanathan Tumkur ... with Sri Shringeri Jagadguru H.H. Sri Sri Bharathi Thirtha Maha Swamiji and Sri Veereshananda Saraswathi Swamiji

 







R Vishwanathan with Sri Shringeri Jagadguru H H Sri Bharathi Thirtha Maha Swamiji 

R Vishwanathan with Wadali Brothers SIT Tumakuru

R.Vishwnanathan with WADALI BROTHERS ( Sri Puranachand Wadali & Sri Pyarelal Wadali ), famous Sufi Singers & Musicians of Panjab, Sri Siddaganga Institute of Technology, Tumakuru


 

R Vishwanathan Tumkur with Sri Ramesh Aravind, Sri Shivaram & Sri B Suresh


R Vishwanathan  Tumkur with Sri Ramesh Aravind,


R Vishwanathan  Tumkur with Sri Shivaram


 

R Vishwanathan with Sri R V Deshapande, Former Minister

 ಶ್ರೀ ದೇಶಪಾಂಡೆಯವರ ಜೊತೆಯಲ್ಲಿ

*****************************
ನಾಡಿನ ಹಿರಿಯ ರಾಜಕಾರಣಿಗಳಲ್ಲೊಬ್ಬರಾದ ಹಾಗೂ ಮಾಜಿ ಸಚಿವರೂ ಹಾಲಿ ಶಾಸಕರೂ ಆಗಿರುವ ಸನ್ಮಾನ್ಯ ಶ್ರೀ ಆರ್.ವಿ.ದೇಶಪಾಂಡೆಯವರನ್ನು ಭೇಟಿಯಾಗುವ ಸದವಕಾಶ ಇಂದು (ದಿ.21-03-2021, ಭಾನುವಾರ) ಬೆಳಗ್ಗೆ ನನಗೊದಗಿತು.
ನಮ್ಮ ತುಮಕೂರಿನ ಜಯನಗರದಲ್ಲಿರುವ ವಿಪ್ರಭವನದಲ್ಲಿ ನಡೆದ ಸಮಾರಂಭಕ್ಕೆ ಶ್ರೀ ದೇಶಪಾಂಡೆಯವರು ಆಹ್ವಾನಿತರಾಗಿದ್ದರು. ಆಗ ವೇದಿಕೆಯಲ್ಲೇ ಅವರೊಡನೆ ಮಾತನಾಡುವ ಅವಕಾಶ ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷರಾದ ಶ್ರೀ ಎನ್.ಆರ್.ನಾಗರಾಜರಾವ್ ರವರ ಮೂಲಕ ಲಭಿಸಿತು. ಈ ಸಮಾರಂಭದಲ್ಲಿ ನನಗೆ ಪರಿಚಿತರೂ, ಆತ್ಮೀಯರೂ ಆದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಲಿಯ ಅಧ್ಯಕ್ಷರಾದ ಶ್ರೀ ಎಚ್.ಎಸ್.ಸಚ್ಚಿದಾನಂದ ಮೂರ್ತಿರವರು, ಮಂಡಲಿಯ ನಿರ್ದೇಶಕರಾದ ಶ್ರೀ ರಂಗವಿಠಲರವರು, ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನ ಮಾಜಿ ಅಧ್ಯಕ್ಷರಾದ ಶ್ರೀ ಅಸಗೋಡು ಜಯಸಿಂಹರವರು ಮತ್ತಿತರ ಪ್ರಮುಖ ಗಣ್ಯರ ಭೇಟಿಯೂ ಆದುದು ಸಂತೋಷವನ್ನುಂಟುಮಾಡಿತು.
with former minister of karnataka Sri R V Deshapande


R Vishwanathan Tumkur with Sri R V Deshapande, Former Minister



R Vishwanathan Tumkur with Sri R V Deshapande, Former Minister


Sunday, January 24, 2021

R Vishwanathan Tumkur with Dr. C N Manjunath, Jayadeva Hospital, Bangalore 2019 ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್ ರವರೊಡನೆ

"ಡಿವಿಜಿಯವರ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆಯೇ" ಹೀಗೆ ಸಂತಸದಿಂದ ಉದ್ಗರಿಸಿದವರು ನಾಡಿನ ಹೆಮ್ಮೆಯ ಹಾಗೂ ಪ್ರಖ್ಯಾತ ಹೃದ್ರೋಗ ತಜ್ಞರಾದ, ಬೆಂಗಳೂರಿನ ಜಯದೇವ ಹೃದ್ರೋಗ ಕೇಂದ್ರದ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ರವರು.

ತುಮಕೂರಿನ ಟಿ.ಎಚ್.ಎಸ್. ಆಸ್ಪತ್ರೆಗೆ ಮತ್ತು ಜೀವಾ ಎಂ.ಆರ್.ಐ. ಸೆಂಟರ್ ಗೆ ದಿನಾಂಕ 14-09-2019  ಮಂಗಳವಾರ ಅವರು ಭೇಟಿ ನೀಡಿದ್ದಾಗ ಈ ಆಸ್ಪತ್ರೆ ಸಮೂಹದ ಮುಖ್ಯಸ್ಥರಲ್ಲೊಬ್ಬರಾದ ಡಾ. ಟಿ.ಎಸ್. ವಿಜಯ್ ಕುಮಾರ್ ರವರು ನನ್ನನ್ನು ಡಾ. ಮಂಜುನಾಥ್ ರವರಿಗೆ ಪರಿಚಯಿಸುತ್ತ, "ಇವರು ತುಮಕೂರಿನಲ್ಲಿ ಕಳೆದ  75 ತಿಂಗಳುಗಳಿಂದ ಡಿ.ವಿ. ಗುಂಡಪ್ಪರವರ ಸ್ಮರಣೆಯಲ್ಲಿ "ಡಿವಿಜಿ ನೆನಪು" ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ" ಎಂದು ಹೇಳಿದರು.

ಆಗ ಕುತೂಹಲದಿಂದ ಹಾಗೂ ಅತ್ಯಂತ ಸೌಜನ್ಯದಿಂದ ಕಾರ್ಯಕ್ರಮದ ಬಗ್ಗೆ ಕೇಳಿ ತಿಳಿದುಕೊಂಡ ಡಾ.ಮಂಜುನಾಥ್ ರವರು ಮೇಲಿನಂತೆ ಉದ್ಗರಿಸಿದರು.

"ನಮ್ಮ ಕಾರ್ಯಕ್ರಮಕ್ಕೆ ತಾವೂ ಒಮ್ಮೆ ದಯಮಾಡಿ ಆಗಮಿಸಬೇಕು" ಎಂದು ನಾನು ಕೇಳಿಕೊಂಡಾಗ ಅವರು "ಖಂಡಿತವಾಗಿ ಬರುತ್ತೇನೆ" ಎಂದು ಖುಷಿಯಿಂದಲೇ ಪ್ರತಿಕ್ರಿಯಿಸಿದರು. ಅವರೊಂದಿಗಿನ ಮಾತುಕತೆ ಮನಸ್ಸನ್ನು ಮುದಗೊಳಿಸಿತು. ಯಾವುದೇ ಬಿಗುಮಾನವಿಲ್ಲದೆ ಎಲ್ಲರೊಂದಿಗೆ ಬೆರೆಯುವ ಅವರ ಸರಳತೆ, ಸೌಜನ್ಯಯುತ ನಡವಳಿಕೆ ಗಮನ ಸೆಳೆಯಿತು.

ಭೇಟಿಯ ಸಂದರ್ಭದಲ್ಲಿ ಅಲ್ಲಿದ್ದ ಗಣ್ಯರೊಡನೆ ಅನೌಪಚಾರಿಕವಾಗಿ ಡಾ.ಮಂಜುನಾಥ್ ರವರು ಮಾತನಾಡುತ್ತ "ಬುದ್ಧಿವಂತಿಕೆಗಿಂತ ಹೃದಯವಂತಿಕೆ ಮುಖ್ಯ. ಕೌಶಲ್ಯಕ್ಕಿಂತ ಕರುಣೆ ಮುಖ್ಯ, ದೃಷ್ಟಿಗಿಂತ ದೂರದೃಷ್ಟಿ ಮುಖ್ಯ" ಎಂದು ಹೇಳಿದ್ದು, ಅಲ್ಲಿದ್ದ ಎಲ್ಲರೂ ಮತ್ತೊಮ್ಮೆ, ಮಗದೊಮ್ಮೆ ಆಲೋಚಿಸುವಂತೆ ಮಾಡಿತು. ಇಲ್ಲಿನ ಚಿತ್ರದಲ್ಲಿ ತುಮಕೂರು  ನಗರದ ಖ್ಯಾತ ಉದ್ಯಮಿಗಳಾದ ಶ್ರೀಮತಿ ಆಶಾ ಪ್ರಸನ್ನಕುಮಾರ್ ರವರು, ಎಸ್.ಎಸ್.ಐ.ಟಿ.ಯ ಆಗಿನ ಪ್ರಾಚಾರ್ಯರಾಗಿದ್ದ ಡಾ.ವೀರಯ್ಯರವರು, ಟಿ.ಎಚ್.ಎಸ್.ಆಸ್ಪತ್ರೆಯ ಡಾ.ಟಿ.ಎಸ್.ವಿಜಯಕುಮಾರ್ ರವರು ಮೊದಲಾದ ಗಣ್ಯರುಗಳನ್ನು ಕಾಣಬಹುದು.

ಈ ಅವಿಸ್ಮರಣೀಯ ಭೇಟಿಗೆ ಅವಕಾಶ ಕಲ್ಪಿಸಿದ ಟಿ.ಎಚ್.ಎಸ್. ಆಸ್ಪತ್ರೆಯ ಮುಖ್ಯಸ್ಥರೂ, ಆತ್ಮೀಯರೂ ಆದ ಡಾ. ಟಿ.ಎಸ್. ವಿಜಯಕುಮಾರ್ ಅವರಿಗೆ ಧನ್ಯವಾದಗಳು.



R Vishwanathan Tumkur with Dr. C N Manjunath, Jayadeva Hospital, Bangalore


R Vishwanathan Tumkur with Dr. C N Manjunath, Jayadeva Hospital, Bangalore 

 


Saturday, January 23, 2021

With Sri Syed Kirmani & Sri Vinay Kumar, Cricketers (R Vishwanathan) ಶ್ರೀ ಸೈಯದ್ ಕಿರ್ಮಾನಿ ಮತ್ತು ಶ್ರೀ ವಿನಯ್ ಕುಮಾರ್ ರವರೊಡನೆ

 ಅಂತರ ರಾಷ್ಟ್ರೀಯ ಖ್ಯಾತಿಯ ಕ್ರಿಕೆಟಿಗರಾದ ಶ್ರೀ ಸೈಯದ್ ಕಿರ್ಮಾನಿ ರವರು ಮತ್ತು ಶ್ರೀ ವಿನಯ್ ಕುಮಾರ್ ರವರು ಬೇರೆ ಬೇರೆ ಸಂದರ್ಭಗಳಲ್ಲಿ ತುಮಕೂರು ನಗರಕ್ಕೆ ಆಗಮಿಸಿದ್ದಾಗ, ನಾನು ಅವರನ್ನು ಭೇಟಿ ಮಾಡಿದ ಸುಸಂದರ್ಭ.





R Vishwanathan With Sri Anil Kumble, Indian Cricketer 2011 ಶ್ರೀ ಅನಿಲ್ ಕುಂಬ್ಳೆಯವರೊಂದಿಗೆ

 
ಭಾರತೀಯ ಕ್ರಿಕೆಟ್ ತಂಡದ ಪ್ರಖ್ಯಾತ ಕ್ರಿಕೆಟಿಗರೂ, ತಂಡದ ಮಾಜಿ ನಾಯಕರೂ ಆದ ಶ್ರೀ ಅನಿಲ್ ಕುಂಬ್ಳೆ ರವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾಗ 2011 ರ ನವೆಂಬರ್ 1 ರಂದು ತುಮಕೂರು ನಗರಕ್ಕೆ ಭೇಟಿ ಕೊಟ್ಟಿದ್ದರು. ಆಗ ತುಮಕೂರಿನ ಎಸ್.ಎಸ್.ಐ.ಟಿ.ಯ ಅತಿಥಿಗೃಹದಲ್ಲಿ ನಡೆದಿದ್ದ ಸಭೆಯಲ್ಲಿ ನಾನೂ ಭಾಗವಹಿಸಿದ್ದೆ. 
ಆ ಸಭೆಯಲ್ಲಿ ಸರ್ವಶ್ರೀ ಜಿ.ಬಿ. ಜ್ಯೋತಿಗಣೇಶ್, ಜಿ.ಎಸ್.ಸೋಮಶೇಖರ್, ಟಿ.ಬಿ.ಪ್ರಶಾಂತ್, ಆರೋಕ್ಯಸ್ವಾಮಿ, ಸತೀಶ್ ಚಂದ್ರ, ಬಿ.ಜಿ.ಶ್ರೀನಿವಾಸರಾವ್ ಮೊದಲಾದ ಗಣ್ಯರುಗಳು ಪಾಲ್ಗೊಂಡಿದ್ದರು.